Saturday, January 31, 2009

ನಮ್ಮ ಮನೆಯ ತುಳು ಲಿಪಿ ತಾಳೆ ಗರಿ ಗ್ರಂಥ.




ನಮ್ಮ ಮನೆ ವಿಟ್ಲ ಬಳಿಯ ಆಲಂಗಾರು. ಇದು ನಮ್ಮ ಮನೆತನದ ಆದಿ ಮನೆ. ನಮ್ಮ ಹಳೆ ಗ್ರಂಥಗಳು ಇರುವುದು ಇಲ್ಲೇ.

ಮೇಲೆ ಕಾಣುವ ಚಿತ್ರ ಒಂದು ಗ್ರಂಥದ ಪುಟ. ಇದು ಪಂಚಾಯತನ ಪೂಜಾ ಪಧ್ಧತಿಯ ಪುಸ್ತಕ.

ಇಂತಹ ಹಲವಾರು ಗ್ರಂಥಗಳು ಪೆಟ್ಟಿಗೆಯಲ್ಲಿ ಭದ್ರವಾಗಿವೆ. ಆದರೆ ಬಹಳಷ್ಟು ಕಡೆ ಇದನ್ನು ಓದುವವರಿಲ್ಲದೆ ಸುಮ್ಮನೆ ಇಟ್ಟಿದ್ದಾರೆ.

ದಕ್ಷಿಣ ಕನ್ನಡದ ಹಲವಾರು ಮನೆತನದವರು ಇಂತಹ ಪುಸ್ತಕಗಳನ್ನು ಧರ್ಮಸ್ಥಳ ವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ಕೊಟ್ಟಿದ್ದಾರೆ. ಆಸಕ್ತರು ನೋಡಬೇಕಿದ್ದರೆ ಧರ್ಮಸ್ಥಳ ಉತ್ತಮ ಜಾಗ.


1 comment:

  1. ಬಹಳ ಒಳ್ಳೆಯ ಕೆಲಸ.ನಿಮ್ಮ ಕಾರ್ಯ ಶ್ಲಾಘನೀಯ.
    ನನಗೆ ತುಳು ಭಾಷೆ ಬಾರದಿದ್ದರೂ,ನಾನು ತುಳು ಲಿಪಿಯನ್ನು ಕಲಿತಿದ್ದೇನೆ.
    ಮೇಲ್ಗಡೆ ಇರುವ ತಾಳೆಗರಿಗಳು ಸಂಸ್ಕೃತಭಾಷೆಯ ಮಂತ್ರಗಳು.
    ನಾನು ನಿಧಾನವಗಿ ಅಧ್ಯಯನ ಮಾಡಿದಾಗ ಅಲ್ಲಿಯ ಮಂತ್ರಗಳು ಹೀಗಿವೆ
    "ಓಂ ಸುವಃ ಪುರುಷಮಾವಾಹಯಾಮಿ |ಓಂ ಭೂರ್ಭುವಃ ಸುವಃ ಪುರುಷಮಾವಾಹಯಾಮಿ .....ಓಂ ನಾರಾಯಣಾಯ ವಿದ್ಮಹೇ ವಿಷ್ಣುಃ ಪ್ರಚೋದಯಾತ್ ..." ಮುಂದಿನ ಭಾಗಾಗಳು ವಿಕಾರಗೊಂದಿವೆ.
    ನನಗೆ ತುಳು ಲಿಪಿ ಬಗ್ಗೆ ಇನ್ನಷ್ಟು ಮಾಹಿತಿ ಬೇಕಾಗಿದೆ . ದಯವಿಟ್ಟು ನನ್ನನ್ನು ಸಂಪರ್ಕಿಸಿ .
    ಶ್ರೀನಿಧಿ ,ತುಮಕೂರು

    ReplyDelete