ಮಂಗಳೂರು ಪರಿಸರದಲ್ಲಿ ೧೮೫೭ ರ ಮುಂಚೆ ಇದ್ದ ಶೈಕ್ಷಣಿಕ ವ್ಯವಸ್ಥೆಗೂ ನಂತರದ ಶಾಲಾ ವ್ಯವಸ್ಥೆಗೂ ಬಹಳಷ್ಟು ವ್ಯತ್ಯಾಸಗಳಿವೆ.
ಮುಂಚೆ "ಸಂಚಾರಿ ಶಾಲೆಗಳು " ಪ್ರಚಲಿತವಿದ್ದವು. ಇವುಗಳನ್ನು ನಡೆಸಲು ಸಹಾಯ ಮಾಡುತ್ತಿದ್ದರು ಊರ ಹಿರಿಯರು. ಶಾಲೆಯ ಅಧ್ಯಾಪಕರನ್ನು "ಐಗಳು" ಎಂದು ಕರೆಯುತ್ತಿದ್ದರು. ಈಗಿನಂತೆ ಶಾಲಾ ಕಟ್ಟಡಗಳು ಇರಲಿಲ್ಲ. ಇದು ಉದ್ಯೋಗಕ್ಕಿಂತ ಅಭಿರುಚಿ ಮುಖ್ಯ ವಾಗಿರುವ ಕಾರ್ಯವಾಗಿತ್ತು. ಇದಕ್ಕಾಗಿಯೇ ಊರಿನ ಪೂಜೆ ಪುನಸ್ಕಾರಗಳಲ್ಲಿ ಅವರಿಗೆ ವಿಶೇಷ ಮರ್ಯಾದೆ ಇತ್ತು.
ಈ ಶಾಲೆಗಲ್ಲಿ ಅಧಿಕೃತ ಪಾಠ ಪಟ್ಟಿ ಇರಲಿಲ್ಲ. ಆದರೂ ೪ ರಿಂದ ೫ ವರ್ಷಗಳಷ್ಟುಕಲಿಕೆ ಇತ್ತು. ಸರಿಯಾಗಿ ಓದಲು ಬರೆಯಲು ಆಗುವಷ್ಟು ಕಲಿಸುತಿದ್ದರು. ಒಂದು ತಂಡದ ವಿದ್ಯಾರ್ಥಿಗಳು ಶಿಕ್ಷಣ ಮುಗಿಸಿದ ನಂತರ ಇನ್ನೊಂದು ಊರಲ್ಲಿ ಶಾಲೆ ತೆರೆಯುತ್ತಿದ್ದರು.
ಅದೇ ಊರಲ್ಲಿ ಮುಂದುವರಿಸಲು ಅಸ್ಟೊಂದು ವಿದ್ಯಾರ್ಥಿಗಳು ಇರಲಿಲ್ಲ. ಕೆಲಯೊಂದು ಕಡೆ ಮಾತ್ರ ಇಂಥ ಶಾಲೆಗಳು ಶಾಶ್ವಥವಾಗಿದ್ದವು. ಉದಾಹರಣೆಗೆ ವಿಟ್ಲ ಅರಮನೆ.
ವಿತ್ಳದಂಥ ರಾಜ್ಯಗಳು ಬಹಳ ಚಿಕ್ಕರಾಜ್ಯ ಗಳಾದುದರಿಂದ ಮೈಸೂರಿನಂತೆ ವ್ಯವಸ್ಥಿತ ಶಿಕ್ಷಣ ಸಾಧ್ಯವಾಗಿರಲಿಲ್ಲ.
ಇಂಥ ಶಾಲೆಗಳಲ್ಲಿ ಕನ್ನಡ ಹಾಗೂ ತುಳು ಲಿಪಿಗಳನ್ನು ಕಲಿಸುತ್ತಿದ್ದರು. ಆ ದಿನಗಳಲ್ಲಿ ವಿದ್ಯಾರ್ಥಿಗಳು ಮುಖ್ಯವಾಗಿ ಮೇಲು ವರ್ಗದವರಿದ್ದರಿಂದ ಹೆಚ್ಚಿನ ತುಳು ಸಾಹಿತ್ಯಗಳೆಲ್ಲ ಪೂಜೆಗಳಿಗೆ ಸಂಬಂಧಿಸಿದವಾಗಿವೆ. ಈ ಶಿಕ್ಷಣದ ನಂತರ ಆಸಕ್ತಿ ಇದ್ದವರು ತಂಜಾವೂರು ಮುಂತಾದ ಕಡೆ ಹೋಗಬೇಕಿತ್ತು. ಅಲ್ಲಿ ಸಂಸ್ಕ್ರತ ಕಲಿವುವ ಅವಕಾಶ ಇತ್ತು. ಹಾಗೆ ಉಡುಪಿ ಯಲ್ಲಿ ಕೂಡ ವಿಧ್ಯಾಭ್ಯಾಸ ಮುಂದುವರಿಸ ಬಹುದಾಗಿತ್ತು. ಈ ಕಾರಣದಿಂದಾಗಿ ಹೆಚ್ಚಿನ ಬರಹ ಕನ್ನಡ ಹಾಗೂ ತುಳು ಲಿಪಿಗಳಲ್ಲಿ ಉಂಟಾದವು. ಶಿವಳ್ಳಿ ಬ್ರಾಹ್ಮಣರು ತುಳು ಭಾಷಿಕರಾದುದರಿಂದ ದಕ್ಷಿಣ ಕನ್ನಡ ಪರಿಸರದಲ್ಲಿ ಪೂಜೆ ಪುಸ್ತಕಗಳು ತುಳು ಲಿಪಿಯಲ್ಲೇ ಪ್ರಚಲಿತವಿದ್ದವು. ಹಾಗಾಗಿ ತುಳು ಭಾಷೆಗೆ ಲಿಪಿ ಇದ್ದರೂ ಆ ಲಿಪಿಯಲ್ಲಿ ಬರೆದ ಗ್ರಂಥಗಳು ಸಂಸ್ಕೃತ ಭಾಷೆಯವೇ ಆಗಿವೆ. ಹಾಗಾಗಿ ತುಳು ಲಿಪಿ ಹಾಗೂ ತುಳು ಭಾಷೆಗಳ ನಡುವೆ ಅಂತರ ಹಾಗೆ ಉಳಿಯಿತು.